ಬಳೆ ಆಟ ಆಡಲು ಬೇಕಾಗುವ ವಸ್ತುಗಳು- ಬಳೆ ಚೂರುಗಳು ಒಂದು ಮುಷ್ಠಿಯಷ್ಟು ಅಥವಾ ಹೆಚ್ಚು. ಆಟದ ವಿವರಣೆ- ಬಳೆಗಳು ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಒಡೆದ ಮೇಲೂ ಹಳ್ಳಿಗಳಲ್ಲಿನ ಮಕ್ಕಳು ಆ ಬಳೆ ಚೂರುಗಳನ್ನುಪಯೋಗಿಸಿ ಆಡುವ ಆಟವೇ ಈ ಬಳೆ ಆಟ. ಮನೆಯೊಳಗಡೆ ಹೊರಗಡೆ ಎಲ್ಲೂ ಆಡಬಹುದಾದ ಹಾಗೂ ಬಿಸಿಲು ಮಳೆ ಎನ್ನದೆ ಯಾವಾಗ ಬೇಕಾದರೂ ಈ ಆಡಬಹುದಾದ ಈ ಆಟ ಮಕ್ಕಳ ಅಚ್ಚು ಮೆಚ್ಚು. ಆಡುವ ವಿಧಾನ · ಎರಡು ಹಾಗೂ ಎರಡಕ್ಕಿಂತ ಹೆಚ್ಚಿನ ಮಂದಿ ಆಡುವ ಆಟವಾಗಿದೆ ಇದು . ಕನಿಷ್ಟ 2 ಮಂದಿಯಾದರೂ ಈ ಆಟವಾಡಲು ಬೇಕು. · ಆಟಗಾರರೆಲ್ಲರೂ ಮೊದಲಿಗೆ ವೃತ್ತಾಕಾರದಲ್ಲಿ ಕುಳಿತುಕೊಳ್ಳಬೇಕು. · ಒಬ್ಬ ಆಟಗಾರನು ಆಟವನ್ನು ಪ್ರಾರಂಭಿಸುತ್ತಾನೆ. · ಆಟಗಾರನು ಬಳೆ ಚೂರುಗಳನ್ನು ಅಂಗೈಯಲ್ಲಿರಿಸಿ ಮೇಲಕ್ಕೆಸೆದು ಕೈಯನ್ನು ತಿರುಗಿಸಿ ಮುಂಗೈಯಲ್ಲಿ ಹಿಡಿಯಬೇಕು. · ಉಳಿದ ಆಟಗಾರರು ಮುಂಗೈ ಮೇಲಿನ ಬಳೆ ಚೂರುಗಳಲ್ಲಿ ಒಂದನ್ನು ಆಯ್ಕೈ ಮಾಡಬೇಕು. · ಆಟಗಾರನು ಆ ಬಳೆ ಚೂರನ್ನು ಹೊರತು ಪಡಿಸಿ ಉಳಿದ ಬಳೆ ಚೂರುಗಳನ್ನು ಕೆಳಕ್ಕೆ ಬೀಳಿಸಬೇಕು, ಆ ಬಳೆ ಚೂರನ್ನು ಎರಡು ಬೆರಳುಗಳ ಮಧ್ಯದಲ್ಲಿರಿಸಬಹುದು. · ನಂತರ ಆ ಬಳೆ ಚೂರನ್ನು ಹಿಡಿದುಕೊಂಡು ಕೆಳಗಿರುವ ಬಳೆ ಚೂರುಗಳನ್ನು ಎತ್ತಬೇಕು. ಎತ್ತಿರುವ ಬಳೆ ಚೂರುಗಳು ಅವರಿಗೆ ಸಿಗುತ್ತವೆ. · ಒಂದುವೇಳೆ ಆ ಬಳೆ ಚೂರು ಬಿದ್ದಲ್ಲಿ ಅವರ ಸರದಿ ಮುಗಿಯುತ್ತದೆ ಹಾಗೂ ಮುಂದಿನ ಆಟಗಾರನು ಆಡುತ್ತಾನೆ. · ಅಚ್ಚನ್ಕಲ್ಲು ಈ ಆಟದ ಒಂದು ಪರ್ಯಾಯ ರೂಪವಾಗಿದೆ ಮಾಹಿತಿ ಸಂಗ್ರಹಣೆ- ಯಲ್ಲಮ್ಮ ಆಲಂಬ ಮಾಲೂರು